00:00:06
ಆತ್ಮೀಯ
00:00:08
ವಿದ್ಯಾರ್ಥಿಗಳೇ ನನ್ನ ಹೆಸರು ಡಾಕ್ಟರ್
00:00:11
ಜ್ಯೋತಿಶಂಕರ್ ಕರ್ನಾಟಕ ರಾಜ್ಯ ಮುಕ್ತ
00:00:15
ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸಹಾಯಕ
00:00:18
ಪ್ರಾಧ್ಯಾಪಕನಾಗಿ ಕಾರ್ಯವನ್ನು
00:00:21
ನಿರ್ವಹಿಸುತ್ತಿದ್ದೇನೆ ಇವತ್ತಿನ ಈ
00:00:24
ತರಗತಿಯಲ್ಲಿ ಪ್ರಥಮ ಬಿಎ ಬಿಕಾಂ ಬಿ ಎಸ್ಸಿ
00:00:28
ಬಿಸಿಎ ಬಿ ಬಿಎ ಈ ಎಲ್ಲಾ ವಿದ್ಯಾರ್ಥಿಗಳಿಗೆ
00:00:33
ಸಂಬಂಧಪಟ್ಟ ಹಾಗೆ ಮೊದಲನೆಯ ಸೆಮಿಸ್ಟರ್ ನ ಕನ್ನಡ
00:00:38
ಭಾಷಿಕವನ್ನ ಈ ತರಗತಿಯಲ್ಲಿ ನಾನು ಪಾಠ ಮಾಡ್ತಾ
00:00:41
ಇದ್ದೇನೆ ಇಡೀ ಕನ್ನಡ ಭಾಷೆಯನ್ನು ಸವಿಸ್ತರ
00:00:45
ಮತ್ತು ಅವಿಸ್ತರ ಪಠ್ಯಗಳೆಂತ ಹೇಳಿ ವರ್ಗೀಕರಣ
00:00:49
ಮಾಡಲಾಗಿದೆ ಇವತ್ತು ನಿಮಗೆ ಮಾತಾಡುವಂತಹ ಎಲ್ಲಾ
00:00:53
ವಿಷಯವು ಕೂಡ ಸವಿಸ್ತರ ಪಠ್ಯಕ್ಕೆ
00:00:57
ಸಂಬಂಧಿಸಿರುವಂತದ್ದು ಅದರಲ್ಲೂ ಮೊದಲನೇ ಬ್ಲಾಕ್
00:01:01
ಅನ್ನುವಂತದ್ದು ಹೊಸಗನ್ನಡ ಕವಿತೆಗಳಿಗೆ
00:01:05
ಸಂಬಂಧಪಟ್ಟಿರುವಂತದ್ದು ಇದರಲ್ಲಿ 16 ಕವಿಗಳು
00:01:09
ಬರೆದಿರುವಂತಹ 16 ಕವಿತೆಗಳನ್ನು ನಾವು ನಿಮಗೆ
00:01:13
ಪಠ್ಯವಾಗಿ ಇಟ್ಟಿದ್ದೇವೆ ಇದಕ್ಕೆ ಇರುವಂತಹ ಕಾರಣ
00:01:17
ಅಂತ ಹೇಳಿ ಅಂದ್ರೆ ಆಧುನಿಕ ಕನ್ನಡ ಕಾವ್ಯವನ್ನು
00:01:21
ನೀವು
00:01:22
ಅರ್ಥಮಾಡಿಕೊಳ್ಳುವಂತದ್ದು ಇಂಗ್ಲಿಷ್ ಸಾಹಿತ್ಯದ
00:01:25
ಒಂದು ಪ್ರಭಾವದಿಂದ ಈ ರೊಮ್ಯಾಂಟಿಕ್ ಸಾಹಿತ್ಯ
00:01:29
ಅಥವಾ
00:01:30
ಅಂತ ಹೇಳಿ ನಾವು ಕರೀತೀವಲ್ಲ ಅದು ಕನ್ನಡಕ್ಕೆ
00:01:34
ಬಂತು ಮೊದಲು ಅದರಲ್ಲಿ ಇಮ್ಯಾಜಿನೇಷನ್ ಅಂದ್ರೆ
00:01:37
ಕಲ್ಪನೆಗೆ ಅತ್ಯಂತ ಪ್ರಾಧಾನ್ಯತೆಯನ್ನು
00:01:40
ಕೊಡಲಾಯಿತು ಅದಾದ ನಂತರ ಸೌಂದರ್ಯ ಇಂದ್ರಿಯದ
00:01:44
ಅನುಭವಗಳೇ ಮುಖ್ಯ ಕನಸುಗಳು ಅನುಭವ ಎಲ್ಲವನ್ನು
00:01:48
ಇಟ್ಟುಕೊಂಡು ಈ ರೊಮ್ಯಾಂಟಿಕ್ ಸಾಹಿತ್ಯ ಮೂಡ್ತಾ
00:01:51
ಬಂತು ಅದರ ಜೊತೆಗೆ ನವೋದಯ ಸಾಹಿತ್ಯವನ್ನ ನಾವು ಈ
00:01:56
ಆಧುನಿಕ ಸಾಹಿತ್ಯದಲ್ಲಿ ಬಹಳ ವಿಶೇಷವಾಗಿ ನಾವು
00:02:00
ಗುರುತಿಸುತ್ತೇವೆ ಈಗ ಅದರ ಮೊದಲ ಲಕ್ಷಣ ನಿಮಗೆ
00:02:04
ಗೊತ್ತಾಗಿದೆ ನಿಯೋ ಕ್ಲಾಸಿಕಲ್ ಅನ್ನುವಂತಹ
00:02:07
ಶಬ್ದವನ್ನು ನೀವು ಕೇಳಿದ್ರಿ ಅಂದ್ರೆ ನವ ಅಭಿಜಾತ
00:02:10
ಪರಂಪರೆ ಅಂತ ಹೇಳಿ ನಾವು ಇದನ್ನ ಕರೀತೀವಿ
00:02:14
ಅಂದ್ರೆ ಕಾವ್ಯ ಅನ್ನುವಂತದ್ದು ಕೃತ್ರಿಮದ
00:02:18
ಭಾಷೆಯನ್ನು ಪಕ್ಕಕ್ಕೆ ಸರಿಸಿ ಆಡು ಮಾತಿನ ಶುದ್ಧ
00:02:22
ಸ್ವರೂಪವನ್ನ ಕಾವ್ಯದ ಭಾಷೆಯಾಗಿ ತರಲು
00:02:25
ಆರಂಭವಾಯಿತು ಅಂದ್ರೆ ಹಿಂದೆ ಬಳಸ್ತಾ
00:02:27
ಇದ್ದಿದ್ದೆಲ್ಲ ಕೃತ್ರಿಮವ ಅಂತ ಅನ್ಕೋಬೇಡಿ
00:02:30
ಅವತ್ತಿನ ಕಾಲಕ್ಕೆ ಅದು ಆಡು
00:02:33
ಭಾಷೆಯಾಗಿತ್ತು ಅಂದ್ರೆ ಈ ರೊಮ್ಯಾಂಟಿಸಂ
00:02:36
ಅನ್ನುವಂತದ್ದು ಬಂತಲ್ಲ
00:02:37
ಕನ್ನಡದಲ್ಲಿ ಅದರ ಉದ್ದೇಶವೇ ಕವಿಗಳಿಗೆ ತಮಗೆ
00:02:42
ದಕ್ಕಿದ ಅನುಭವವನ್ನ ಜನಸಾಮಾನ್ಯರಿಗೂ ಕೂಡ
00:02:45
ತಿಳಿಸಬೇಕು ಅನ್ನುವಂತದ್ದು ಅವರ ಭಾವನೆಯಾಗಿತ್ತು
00:02:49
ಹಾಗಾಗಿಯೇ ಆ ಭಾವಗಳನ್ನ ಪರಿಷ್ಕಾರ ಮಾಡಿಕೊಂಡು
00:02:53
ಅದನ್ನ ಕವನಗಳಾಗಿ ತಗೊಂಡು ಬಂದರು ಅದರ ಜೊತೆಗೆ ಈ
00:02:57
ಆಧುನಿಕ ಕನ್ನಡ ಕಾವ್ಯದ ಬಹು ದೊಡ್ಡ ಸ್ವರೂಪ
00:03:00
ಅಥವಾ ಲಕ್ಷಣ ಏನು ಅಂತ ಹೇಳಿ
00:03:03
ಅಂದ್ರೆ ಅಧ್ಯಾತ್ಮ ನಿಸರ್ಗದ ಮೇಲಿರುವ ಪ್ರೇಮ
00:03:07
ಪ್ರೀತಿ ಪ್ರಣಯ ಸ್ನೇಹ ಇವೆಲ್ಲವನ್ನು ಕೂಡ ಈ
00:03:11
ಕಾವ್ಯಗಳಲ್ಲಿ ತರಲಾಗಿದೆ ನಮ್ಮ ಬಿ ಎಂ ಶ್ರೀ
00:03:15
ಅವರನ್ನು ಸದಾ ನೆನಪಲ್ಲಿ ಇಟ್ಟುಕೊಳ್ಳಬೇಕು
00:03:18
ಅಂದ್ರೆ ಸಾಕಷ್ಟು ಕೆಲಸವನ್ನು ಮಾಡಿದಂತವರು ಈ
00:03:21
ಪಠ್ಯದಲ್ಲಿ ಇಟ್ಟಿರುವಂತಹ ಮೊದಲ ಕವನ ಅಂದ್ರೆ ಈ
00:03:25
ಲಕ್ಷಣಗಳನ್ನು ಇಟ್ಟುಕೊಂಡು ಬಂದಂತಹ ಮೊದಲ ಕವನ
00:03:28
ಅಂದ್ರೆ ಪಂಜೆ
00:03:30
ರಚನೆ ಮಾಡದೆ ಇರುವಂತಹ ಹುತ್ತರಿಯ ಹಾಡು
00:03:33
ಅನ್ನುವಂತ ಹೇಳಿ ಅನ್ನುವಂತಹ
00:03:36
ಕವನ ನಮ್ಮ
00:03:38
ಕರ್ನಾಟಕದಲ್ಲಿ ಕೊಡಗಿಗೆ ಒಂದು ವಿಶೇಷವಾದ
00:03:41
ಸ್ಥಾನವನ್ನು ನಾವು ಕೊಟ್ಟಿದ್ದೇವೆ ಅದಕ್ಕೆ
00:03:42
ಇರುವಂತಹ ಮುಖ್ಯ ಕಾರಣ ಅಂದ್ರೆ
00:03:45
ಅಲ್ಲಿರುವಂತಹ
00:03:47
ಅದ್ಭುತವಾದಂತಹ ಪ್ರಕೃತಿ ಸೌಂದರ್ಯ ಮತ್ತೆ ಅಲ್ಲಿ
00:03:51
ಸ್ಥಳ ಪುರಾಣಗಳಿವೆ ದಂತ ಕಥೆಗಳಿವೆ ಅಲ್ಲಿ
00:03:54
ಆಳಿದಂತಹ ಇದ್ದಂತಹ ವೀರರ ಬಗೆಗಿನ ಕಥೆಗಳಿವೆ
00:03:58
ಅವುಗಳ ಕೊಡಗಿನವರ ಆಚಾರ ವಿಚಾರ ಧೈರ್ಯ
00:04:03
ಕ್ಷಾತ್ರಗುಣ ಇವೆಲ್ಲವೂ ಕೂಡ ಮೇಳೈಸಿಕೊಂಡು ನಾವು
00:04:06
ಅದನ್ನ ಕೊಡಗು ಅಥವಾ ಕೊಡಗಿನ ಸಂಸ್ಕೃತಿ ಅಂತ
00:04:11
ಹೇಳಿ ಕರೀತೀವಿ ಇಂತಹ ಕೊಡಗಿನ ವಿಶಿಷ್ಟ ಬಗೆಯ
00:04:15
ಸಂಸ್ಕೃತಿಯನ್ನ ಚಿತ್ರಣ ಮಾಡುವಂತಹ ಕವನ ಈ
00:04:19
ಹುತ್ತರಿಯ ಹಾಡು ಅದನ್ನ ಬರೆದಿರುವಂತವರು ಪಂಜೆ
00:04:23
ಮಂಗೇಶ್ ರಾಯರು ಕನ್ನಡದ ಒಂದು
00:04:26
ಅದ್ಭುತವಾದಂತಹ ಶಕ್ತಿ ಮಡಿಕೇರಿಯ ಸೆಂಟ್ರಲ್
00:04:29
ಪ್ರೌಢಶಾಲೆಯ
00:04:31
ಮುಖ್ಯೋಪಾಧ್ಯಾಯರಾಗಿದ್ದಾಗ ಬರೆದಂತಹ ಕವನ
00:04:33
ಹುತ್ತರಿ ಅನ್ನುವಂತಹ ಪದ ಇದೆಯಲ್ಲ ಅದರ ಅರ್ಥ
00:04:37
ಹೊಸ ಅಕ್ಕಿ ಅಥವಾ ಹೊಸ ಭತ್ತದ ಬೆಳೆ ಅಂತ ಹೇಳಿ
00:04:41
ಪುದಿ ಅರಿ ಪುತ್ತರಿ ಹುತ್ತರಿ ಪಕಾರ ಹಕಾರ
00:04:45
ಆಗುವಂತಹ ಪ್ರಕ್ರಿಯೆ ಕೊಡವರಲ್ಲಿ ಈ ಹೊಸದಾಗಿ
00:04:48
ಬೆಳೆದಂತಹ ಬೆಳೆಯನ್ನು ಮನೆಗೆ ತಗೊಂಡು
00:04:50
ಬರ್ತಾರಲ್ಲ ಆವಾಗ ಒಂದು ಹಬ್ಬವನ್ನು ಆಚರಣೆ
00:04:54
ಮಾಡ್ತಾರೆ ನಿಮಗೆ ಇನ್ನೊಂದು ಸ್ವಲ್ಪ ಸುಲಭವಾಗಿ
00:04:55
ಅರ್ಥ ಆಗ್ಬೇಕು ಅಂತ ಅಂದ್ರೆ ನಾವು ಸುಗ್ಗಿ
00:04:58
ಮಾಡ್ತೀವಲ್ಲ ಆ ತರದ ಒಂದು ಒಂದು ಪ್ರಕ್ರಿಯೆ ಇದು
00:05:01
ಈ ಹಬ್ಬ ನವೆಂಬರ್ ಡಿಸೆಂಬರ್ ತಿಂಗಳಲ್ಲಿ
00:05:04
ಹುಣ್ಣಿಮೆಯ ದಿವಸಗಳನ್ನು ಇಟ್ಟುಕೊಂಡು ಅದರ
00:05:09
ಆಸುಪಾಸಿನಲ್ಲಿ ಆಚರಣೆಯನ್ನು ಮಾಡಲಾಗುತ್ತದೆ
00:05:12
ಸುಗ್ಗಿ ಕಾಲದಲ್ಲಿ ಆಚರಣೆ ಮಾಡುವಂತಹ ಈ ಹುತ್ತರಿ
00:05:16
ಹಬ್ಬ ಕೊಡಗರ ನಾಡಿನ ಒಂದು ಭವ್ಯ ಸಂಸ್ಕೃತಿಯನ್ನು
00:05:21
ಎತ್ತಿ ಹಿಡಿಯುವಂತದ್ದು ಇಡೀ ಈ ಕಾವ್ಯ ಇದೆಯಲ್ಲ
00:05:25
ಒಂದು ಕವನ ಒಂದು ಕವನವೇ ಕಾವ್ಯವಾಗುವ
00:05:28
ಪ್ರಕ್ರಿಯೆಯನ್ನು ನೀವು ಈ ಭಾಗದಲ್ಲಿ
00:05:30
ಅರ್ಥಮಾಡಿಕೊಳ್ಳುತ್ತೇನೆ ಎಷ್ಟು ಚೆನ್ನಾಗಿದೆ
00:05:32
ಅಂತಂದ್ರೆ ಪಂಜೆ ಮಂಗೇಶ್ವರಾಯರ
00:05:36
ಅತ್ಯದ್ಭುತವಾದಂತಹ ಆ ಬರವಣಿಗೆ ಶೈಲಿ ಕೂಡ ನಿಮಗೆ
00:05:40
ಅರ್ಥ ಆಗುತ್ತೆ ನೋಡಿ ಅದು ಆರಂಭಿಸುತ್ತಾರೆ ಅವರು
00:05:43
ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ
00:05:47
ಬಂದಳು ಎಲ್ಲಿ ಮೋಹನಗಿರಿಯ ಬೆರಗಿನ ರೂಪ ನಿಂದಲಿ
00:05:51
ನಿಂದಳು ಎಲ್ಲಿ ಮುಗಿಲಲಿ ಮಿಂಚಿನೋಲ್ ಕಾವೇರಿ
00:05:55
ಹೊಳೆ ಹೊಳೆ ಹೊಳೆವಳು ಎಲ್ಲಿ ನೆಲವನ್ನು ತಣಿಸಿ
00:05:59
ಜನಮನ ಹೊಲದ ಕಳೆ ಕಳೆ ಕಳೆವಳು ಅಲ್ಲೇ ಆ ಕಡೆ
00:06:03
ನೋಡಲ ಅಲ್ಲಿ ಕೊಡವರ ನಾಡಲ ಅಲ್ಲಿ ಕೊಡವರ ಬೀಡಲ
00:06:08
ನವೋದಯದ ಅಥವಾ ರೊಮ್ಯಾಂಟಿಸಂನ ಬಹಳ ದೊಡ್ಡ ಲಕ್ಷಣ
00:06:12
ಅಂದ್ರೆ ಈ ಲಯವನ್ನ ಪ್ರತಿಪಾದನೆ ಮಾಡುವಂತದ್ದು
00:06:16
ಎಷ್ಟು ಚೆನ್ನಾದ ಲಯ ನೋಡಿ ಎಲ್ಲಿ ಭೂರಮೆ ದೇವ
00:06:20
ಸನ್ನಿಧಿ ಬಯಸಿ ಬಿಮ್ಮನೆ ಬಂದಳು ಈ ಭೂರಮೆ ದೇವ
00:06:26
ಸಾನಿಧ್ಯವನ್ನು ಬಯಸಿ ಬಂದು ನಿಂತಂತಹ
00:06:30
ಜಾಗ ಅದು ಅಂದ್ರೆ ಇದಕ್ಕೊಂದು ಪೌರಾಣಿಕ ಹಿನ್ನಲೆ
00:06:33
ಇದೆ ಅಗಸ್ತ್ಯ ಮಹರ್ಷಿಗಳು ತಪಸ್ಸನ್ನು ಆಚರಣೆ
00:06:37
ಮಾಡಿದಂತಹ
00:06:38
ಜಾಗ ಕಾವೇರಿ ಅಗಸ್ತ್ಯನ ಪತ್ನಿ ಸದಾ ಅವನ ಜೊತೆಗೆ
00:06:44
ಇರಬೇಕು ಅಂತ ಹೇಳಿ
00:06:45
ಬಯಸಿದಂತವಳು ಅಗಸ್ತ್ಯ ಆಕೆಯನ್ನು ಕಮಂಡಲದಲ್ಲಿ
00:06:49
ಇಟ್ಟುಕೊಂಡು ಹೋಗ್ತಾ ಇದ್ದ ಒಂದು ಸರಿ ಅಗಸ್ತ್ಯ
00:06:52
ಕಮಂಡಲವನ್ನು ಬಿಟ್ಟು ಅಲ್ಲಿಯ ಸುತ್ತ ಹೋಗಿದ್ದಾಗ
00:06:56
ಕಾವೇರಿಗೆ ಏಕಾಂಗಿತನ ಕಾಡಿಬಿಡ್ತು ಇದನ್ನ
00:07:00
ಸಹಿಸದೆ ಇದ್ದಂತಹ ಕಾವೇರಿ ಇದರಿಂದ ಹೊರಗಡೆ
00:07:03
ಬರಬೇಕು ಅಂತ ಅಂದುಕೊಂಡ ಆಕೆ ಕಮಂಡಲದಿಂದ ಜಿಗಿದು
00:07:07
ಕಾವೇರಿಯಾಗಿ ಹರಿದಳು ಅನ್ನುವಂತದ್ದು ಪುರಾಣದ
00:07:11
ಒಂದು ಕಥೆ ಅಂದ್ರೆ ಕನ್ನಡ ನಾಡಿನ ಜೀವನದಿ ಅಥವಾ
00:07:15
ದೇವಗಂಗೆ ಅನಿಸಿಕೊಂಡಂತಹ ಕಾವೇರಿ ನದಿ ಹುಟ್ಟಿದ
00:07:19
ಹರಿದ ತವರಿನ ಮನೆ ಕೊಡಗು ಅನ್ನುವಂತದ್ದು
00:07:22
ಪ್ರತೀತಿ ಮತ್ತೆ ಅದನ್ನ ನಾವು ಈಗಲೂ ಕೂಡ
00:07:25
ಪರಿಭಾವಿಸುತ್ತೇವೆ ತಲಕಾವೇರಿ ಅನ್ನುವಂತಹ ಪದ
00:07:28
ನಿಮ್ಮೆಲ್ಲರಿಗೂ ಕೂಡ ಪರಿಚಯ ಇರುವಂತದ್ದೇ ಆ
00:07:31
ಕಾವೇರಿ ನದಿ ತೀರದಲ್ಲಿ ಸಂಸ್ಕೃತಿ ಹೇಗೆ ಹುಟ್ಟಿ
00:07:34
ಬೆಳೆದಿದೆ ಅನ್ನೋದು ಇದೆಯಲ್ಲ ಅದೊಂದು ಮತ್ತೊಂದು
00:07:38
ಅದ್ಭುತವಾದಂತಹ ಕಥಾನಕ ನೀವು ಒಮ್ಮೆ ಅದನ್ನ
00:07:40
ಗಮನಿಸಬೇಕು ಕಾವೇರಿ ಅಲ್ಲಿಂದ ಆರಂಭವಾಗಿ ಅವಳ
00:07:44
ಪ್ರಯಾಣವನ್ನು ಹೇಗೆ ಮುಂದುವರಿಸಿಕೊಂಡು
00:07:46
ಹೋಗ್ತಾಳೆ ಅನ್ನೋದು ಇದೆಯಲ್ಲ ಅದೇ ಒಂದು ದೊಡ್ಡ
00:07:49
ಕಥೆ ಆಗಿಬಿಡುತ್ತೆ ಅಂದ್ರೆ ಆ ಕಾವೇರಿ ಹರಿದ
00:07:56
ಭಾಗದಲ್ಲೆಲ್ಲ ಕದಂಬ ವಂಶದ ಅರಸು ಚಂದ್ರವರ್ಮ
00:08:01
ಅದೇ ಚಂಗಾಳ್ವ ವಂಶದ ಅರಸರು ಹಾಲೇರಿ ವಂಶದ ಅರಸರು
00:08:05
ಹೀಗೆ ಅನೇಕ ಅರಸು ಮನೆತನಗಳು ಅಲ್ಲೆಲ್ಲ
00:08:10
ಆಳ್ವಿಕೆಯನ್ನು ನಡೆಸಿದ್ದಾರೆ ಹಾಗೆ ಅದನ್ನ
00:08:13
ಕುಂತಲ ರಾಜ್ಯ ಅಂತ ಹೇಳಿ ಕೂಡ ಕರೀತಾ ಇದ್ರು
00:08:17
ಅಂದ್ರೆ ನಿಮಗೆ ಚಂದ್ರಹಾಸನ ಕಥೆ ಏನಾದರೂ ಕೇಳಿದ
00:08:21
ನೆನಪಿದ್ರೆ ಅಲ್ಲಿ ಆ ಕಥೆ ನಡೆದಿದೆ
00:08:24
ಅನ್ನುವಂತದ್ದು ಕೂಡ ನಾವು ನೆನಪಲ್ಲಿ ಇಟ್ಕೋಬೇಕು
00:08:27
ಹಾಗೆ ಕೊಡಗು ಮತ್ತು ಮತ್ತು ಶ್ರೀರಂಗಪಟ್ಟಣ
00:08:31
ಚಂದ್ರಹಾಸನ ರಾಜಧಾನಿಯಾಗಿತ್ತು ಅಂತಾನೂ ಒಂದು
00:08:34
ಕಥೆ ಇದೆ ಇಂಥದೊಂದು ಪುರಾಣ ಮತ್ತು ಇತಿಹಾಸ ಎರಡು
00:08:38
ಒಟ್ಟಿಗೆ ಇರುವಂತಹ ಒಂದು
00:08:40
ಕಥೆಯಲ್ಲಿ ಒಂದು ದೊಡ್ಡ ಕಣ್ಣಿಗೆ ಕಾಣುವಂತಹ
00:08:44
ಅಪೂರ್ವವಾದ ಸೃಷ್ಟಿಯಾಗಿ ನಮಗೆ ಈ ಕಾವೇರಿ
00:08:47
ಕಾಣುತ್ತೆ
00:08:49
ಅದಕ್ಕೆ ಮಂಗೇಶ್ ರಾಯರು ಬರೀತಾರೆ ವಿಧಿಯ ಮಾಟದ
00:08:53
ಕೊಡಗಿದು ಮೊದಲೇ ನಮ್ಮದು ಕಡಗಿದು ಕಡಲದೆನು
00:08:57
ಬೆಡಗಿದು ಅಂತ ಹೇಳಿ ಹೇಳುತ್ತಾರೆ ಈ
00:08:59
ಇವೆಲ್ಲದಕ್ಕೂ ಮೂಲ ಕಾರಣವಾಗಿರುವಂತಹ ಜಾಗ ಅದು
00:09:03
ಕರ್ನಾಟಕದ್ದು ಅದು ಕನ್ನಡ ನಾಡಿನದು ಇಲ್ಲಿಯ
00:09:07
ಪಕ್ಕದಲ್ಲಿರುವ ಕೊಡಗಿನದು ಮತ್ತು ಅಲ್ಲಿಯ ಜನ
00:09:10
ಹೇಗಿದ್ದಾರೆ
00:09:11
ಒಗ್ಗಟ್ಟು ಒಟ್ಟಾಗಿ ಬದುಕುವಂತಹ ಒಂದು ಪ್ರಜ್ಞೆ
00:09:15
ಒಟ್ಟಿಗೆ ಸೇರಿಕೊಂಡು ಹಾಡ್ತಾರೆ ಕುಣಿತಾರೆ
00:09:18
ಎಲ್ಲವನ್ನು ಮಾಡುತ್ತಾರೆ ಅದನ್ನ ಬಿಟ್ಟು ಅವರು
00:09:21
ಹೋಗೋದಿಲ್ಲ ಆಚೆಗೆ ಆ ಎಲ್ಲವನ್ನು ಇವತ್ತಿಗೂ
00:09:25
ಉಳಿಸಿಕೊಂಡು ಬಂದಿರುವುದು ಇದೆಯಲ್ಲ ಅದಕ್ಕೆ
00:09:28
ಪಂಜೆಯವರು ಹೇಳುವಂತದ್ದು ಒಮ್ಮತವು ಒಗ್ಗಟ್ಟು
00:09:31
ಒಂದೇ ಮನವು ಎಲ್ಲಿದೆ
00:09:34
ಹೇಳಿರಿ ಎರಡನೇ ಸಾಲು ಗಮನಿಸಿ ಅವರ ವಸ್ತ್ರ
00:09:38
ಸಂಹಿತೆಯನ್ನು ಕುರಿತು ಮಾತಾಡುತ್ತಾರೆ
00:09:40
ಸುಮ್ಮನಿತ್ತರು ದಟ್ಟಿ ಕುಪ್ಪಸ ಹಾಡು
00:09:44
ಹುತ್ತರಿಗೇಳಿರಿ ಚಿಮ್ಮಿ ಪಾತುರೆ ಕೋಲ ಹೊಯ್ಲಿಗೆ
00:09:47
ಕುಣಿವ ಪದ ಹೊರ
00:09:50
ಹೊಮ್ಮಲಿ ಆ ಅವರ ಸೀರೆ ಮತ್ತು ಬೇರೆ ಉಡುಪನ್ನು
00:09:54
ನೀವು ಬೇರೆ ಬೇರೆ ಸಂದರ್ಭದಲ್ಲಿ ಗಮನಿಸಿದ್ದೀರಾ
00:09:57
ಅವರು ಹಾಡುವಂತಹ ಹಾಡುಗಳು ಮತ್ತು ಮತ್ತೆ ಕೋಲ
00:10:00
ಪದಗಳನ್ನು ನೀವು ಅನೇಕ ಗೀತೆಗಳಲ್ಲಿ ಚಲನಚಿತ್ರ
00:10:03
ಗೀತೆಯಿಂದಲೂ ಹಿಡಿದು ನೀವು ನೋಡಿದ್ದೀರಿ ಅಮ್ಮೆ
00:10:06
ಹರಸಿದ ಸೀಮೆ ನಮಗಿದು ಇರಲಿ ನಮ್ಮದೇ ನಮ್ಮಲಿ ಅದು
00:10:11
ಆಡು ಭಾಷೆ ಅಮ್ಮೆ ಅನ್ನುವಂತಹ ಪದ ನೆಮ್ಮದಿಯನ್ನು
00:10:15
ತಾಳಲಿ ಅಮ್ಮೆಯ ಬಲ ತೋಳಲಿ ನಮ್ಮ ಕೊಡಗಿದು ಬಾಳಲಿ
00:10:20
ಇಷ್ಟು ಸಾಲುಗಳಲ್ಲಿ
00:10:22
ಪಂಜೆಯವರು ಇಡೀ ಕೊಡಗಿನ ಜನರ ಬದುಕಿನ ರೀತಿಯನ್ನ
00:10:28
ಕಟ್ಟಿಕೊಟ್ಟುಬಿಡುತ್ತಾರೆ ಅಂದ್ರೆ
00:10:31
ದೇಶಭಕ್ತಿಯನ್ನ ಅವರು ಇಟ್ಕೊಂಡಿದ್ದಾರೆ
00:10:34
ಜನ್ಮಭೂಮಿಯನ್ನ ಕುರಿತಾದ
00:10:36
ಪ್ರೀತಿ ಅದು ಅವರಲ್ಲಿ ಅತ್ಯದ್ಭುತವಾಗಿ
00:10:39
ಇರುವಂತದ್ದು ಈ ಸಾಲುಗಳು ನಮಗೆ ಭೌಗೋಳಿಕ
00:10:43
ಸೌಂದರ್ಯ ಆ ಕೊಡಗರ ಜೀವನದ ಶೈಲಿ ಅವರು
00:10:48
ಹಾಕಿಕೊಳ್ಳುವ ಬಟ್ಟೆ ಊಟ ಎಲ್ಲವನ್ನು ಈ ಇಡೀ ಕವನ
00:10:53
ಸ್ವತಂತ್ರವಾಗಿ ತಂದು ನಮ್ಮ ಮುಂದೆ
00:10:56
ಇಟ್ಟುಬಿಡುತ್ತೆ ಅದನ್ನು ಕುರಿತು ಶಿವರಾಮ್
00:10:59
ಕಾರಂತರು ಒಂದು ಮಾತು ಹೇಳ್ತಾರೆ ಈ ಕವನ
00:11:01
ಇಟ್ಟುಕೊಂಡೆ
00:11:02
ವಿವಿಧ ದೇಶದ ಜನರು ತಮ್ಮ ನಾಡನ್ನು ಕುರಿತು
00:11:06
ನಮಗಿರುವಂತಹ ನಿಷ್ಠೆ ಪ್ರೇಮ ಭಕ್ತಿ
00:11:09
ಮೊದಲಾದವನ್ನು ಹೇಳಿಕೊಂಡಂತಹ ಆಯಾಯ ನಾಡಿನ
00:11:12
ರಾಷ್ಟ್ರಗೀತೆಗಳು
00:11:14
ಬೇಕಾದಷ್ಟಿದೆ ಆದರೆ ಇಲ್ಲಿಗೆ ಹೊರಗಿನವರಾಗಿ
00:11:18
ಬಂದು ಈ ನಾಡಿನ ಬೆಳಗಲ್ಲಿ ಅದ್ದಿ ಮುಳುಗಿ ಅದರ
00:11:21
ಗತ ವೈಭವ ಪುರಾಣ ಆಸ್ವಾದನೆಯಿಂದ ಮತ್ತನಾಗಿ
00:11:26
ಕವಿಯೊಬ್ಬ ಹಾಡಿದ ಈ ಕವನ ಇದೆಯಲ್ಲ
00:11:30
ಅದು ಕೊಡಗಿನ ನಾಡಗೀತೆಗೆ ಸರಿಗಟ್ಟುವ ದೇಶಪರ
00:11:34
ಹಾಡಿನ ರೀತಿಯಲ್ಲಿ ಆಗಿದೆ ಇಂತಹ ರಚನೆಗಳು
00:11:39
ಅತ್ಯಂತ ವಿರಳ ಅಂತಾನೆ ಹೇಳಬೇಕು ಅಂತ ಹೇಳಿ ಅವರು
00:11:43
ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ
00:11:45
ಅಂದ್ರೆ ಈ ಹುತ್ತರಿ ಹಾಡು ಇದೆಯಲ್ಲ ಅದೊಂದು
00:11:49
ಒಂದು ರೀತಿಯಲ್ಲಿ ಗೇಯಗೀತೆ ಧ್ಯೇಯಗೀತೆ ನಾಡಗೀತೆ
00:11:54
ಎಲ್ಲವೂ ಕೂಡ ಆಗ್ಬಿಟ್ಟಿದೆ ಅಲ್ಲಿಯವರೇ ಆದ ಬಿ
00:11:57
ಎಸ್ ಕುಶಾಲಪ್ಪನವರು ಈ ಹಾಡನ್ನು ಕುರಿತು ಒಂದು
00:12:00
ಮಾತು ಹೇಳ್ತಾರೆ ಬ್ರಿಟನ್ ಅನ್ನೋವರಿಗೆ
00:12:03
ರೂಲ್ ಬ್ರಿಟಾನಿಯ ಅನ್ನುವ ಪದ್ಯ ಹೇಗಿದೆಯೋ ಹಾಗೆ
00:12:08
ಕೊಡಗಲ್ಲಿ ಇರುವವರಿಗೆ ಮಂಗೇಶ್ ರಾಯರ ಹುತ್ತಿರಿ
00:12:10
ಹಾಡು ಇದೆಯಲ್ಲ ಅದು ಅಂತಹದೊಂದು ಹಾಡಾಗಿದೆ ಅಂತ
00:12:14
ಹೇಳಿ ಅವರು ಈ ಹಾಡಿನ ಬಗ್ಗೆ ಅಭಿಪ್ರಾಯವನ್ನು
00:12:17
ಹೇಳ್ತಾರೆ ಅದರ ಜೊತೆಗೆ ನೀವೀಗ ನೋಡಿದ್ರಿ ಭಾಷೆ
00:12:20
ಹೇಗಿದೆ ಇಡೀ ಕವನದ್ದು
00:12:24
ಒಂದೇ ಕವನದ ಒಳಗಡೆಗೆ ಒಂದಷ್ಟು ಚರಣಗಳನ್ನು
00:12:28
ಮಾತ್ರ ಬಳಸಿ ಅಲ್ಲಿನ ನೆಲ ಜಲ ಪ್ರಕೃತಿ ಸೌಂದರ್ಯ
00:12:35
ಪ್ರಾದೇಶಿಕವಾಗಿರುವಂತಹ ಚರಿತ್ರೆ ಪುರಾಣ ಅದರ
00:12:39
ವೈಶಿಷ್ಟ್ಯ ಮತ್ತೆ ಆ ಜನರ ಸಾಹಸ ಧೈರ್ಯ ಕ್ಷಾತ್ರ
00:12:44
ಎಲ್ಲವನ್ನು ಕೂಡ
00:12:47
ಅಡಕಗೊಳಿಸುವುದು ಅಂದ್ರೆ ಒಂದು ಕಡೆಗೆ ತಂದು
00:12:50
ಇಡುವಂತದ್ದು ಅಡಕ ಅನ್ನುವ ಪದದ ಅರ್ಥ ಆ
00:12:53
ಕೆಲಸವನ್ನ ಹುತ್ತಿರಿ ಹಾಡು ಕವನ ಮಾಡಿಟ್ಟಿದೆ
00:12:57
ಅಂದ್ರೆ ಮೇಲ್ನೋಟಕ್ಕೆ ಇದು ಅತ್ಯಂತ ಸರಳವಾಗಿ
00:13:00
ಕಾಣಿಸುತ್ತೆ ಈಗ ವಿಧಿಯ ಮಾಟದ ಕೊಡಗಿದು ಎಷ್ಟು
00:13:04
ಸುಲಭ ಅಲ್ವಾ ಕೇಳೋಕೆ ಆದರೆ ಈ ವಿಧಿಯ ಮಾಟದ
00:13:08
ಕೊಡಗಿದು ಅಂತ ಹೇಳಿ ಅನ್ಬೇಕಾದರೆ ಪಂಜೆಯವರ
00:13:11
ದೃಷ್ಟಿಕೋನ ಎಲ್ಲಿತ್ತು ಅಂತ ಹೇಳಿ ಅಂದ್ರೆ
00:13:13
ಕಾವೇರಿ ಇಲ್ಲಿ ಉದ್ಭವ ಆಗಬೇಕು ಉದ್ಭವಳಾದ
00:13:17
ಕಾವೇರಿ ಬರಿ ಕೊಡಗಿಗೆ
00:13:19
ಸೀಮಿತವಾಗಲ್ಲ ಕರ್ನಾಟಕದ ಕಾವೇರಿ ಆಗ್ತಾಳೆ
00:13:22
ಅಲ್ಲಿಗೂ
00:13:24
ನಿಲ್ಲುವುದಿಲ್ಲ ಇನ್ನು ಮುಂದುವರೆಯುತ್ತೆ ನದಿ
00:13:27
ಪಾತ್ರ ಬಂದು ಸಂಸ್ಕೃತಿಯನ್ನು ಸೃಷ್ಟಿ ಮಾಡುವ
00:13:30
ತವರಾಗಿ ಬಿಡುತ್ತೆ ಅನ್ನುವ ಎಲ್ಲ ಸಂಗತಿಯನ್ನ ಆ
00:13:34
ಒಂದು ಸಾಲು ವಿಧಿಯ ಮಾಟದ ಕೊಡಗಿದು
00:13:38
ಅನ್ನುವಂತದ್ದು ಹೇಳುತ್ತಾರಲ್ಲ ಅವರು ಅದು ಬಹಳ
00:13:42
ಅದ್ಭುತವಾಗಿರುವಂತದ್ದು ಮತ್ತೆ ಈ ಇಡೀ ಕವನ
00:13:46
ರಚನೆಯಾಗಿರುವಂತದ್ದು ನಿಮಗೆ ಛಂದಸ್ಸನ್ನು
00:13:49
ಓದಿದ್ದೀರಿ ಭಾಮಿನಿಯ ಲಯನ ಮೂರು ನಾಲ್ಕು ಮೂರು
00:13:52
ನಾಲ್ಕು ಒಮ್ಮತವು ಒಗ್ಗಟ್ಟು ಒಂದೇ ಮನವು
00:13:55
ಎಲ್ಲಿದೆ ಹೇಳಿರಿ ನೆಮ್ಮದಿಯನ್ನು ತಾಳಲಿ ಮೂರು
00:13:59
ನಾಲ್ಕು ನಮ್ಮೆಯ ಬಲ ತೋಳಲಿ ನಮ್ಮ ಕೊಡಗಿದು
00:14:02
ಬಾಳಲಿ ಆ ಭಾಮಿನಿಯ ಲಯ ಮೂರು ನಾಲ್ಕು ಮೂರು
00:14:05
ನಾಲ್ಕು ಮಾತ್ರ ಇದೆಯಲ್ಲ ಆ ಮಾದರಿಯಲ್ಲಿ ಈ
00:14:09
ಛಂದಸ್ಸನ್ನು ಬಳಸಿಕೊಂಡು ಈ ಕವನವನ್ನು ರಚನೆ
00:14:12
ಮಾಡಿದ್ದಾರೆ ಮಧ್ಯಕಾಲೀನ ಕನ್ನಡ ಕಾವ್ಯಗಳಲ್ಲಿ
00:14:16
ಕುಮಾರವ್ಯಾಸ ಚಾಮರಸ ರಚನೆ ಮಾಡಿದಂತಹ ಆ
00:14:19
ಕಾವ್ಯಗಳಲ್ಲಿ ಇದ್ದಂತಹ ಲಯವನ್ನ ಹೊಸ ಶತಮಾನಕ್ಕೂ
00:14:24
ಕೂಡ ತಗೊಂಡು ಬಂದು ಮಾಡಿಟ್ಟಿದ್ದಾರೆ ಇಷ್ಟೆಲ್ಲ
00:14:27
ಮಾಡಿದ ಪಂಜೆ ಮಂಗೇಶ್ ರಾಯರು ಯಾರು
00:14:30
ಅನ್ನುವಂತದ್ದು ಬಹಳ ಮುಖ್ಯ ಪ್ರಶ್ನೆ ದಕ್ಷಿಣ
00:14:33
ಕನ್ನಡ ಜಿಲ್ಲೆಯ
00:14:35
ಬಂಟವಾಳದಲ್ಲಿ 22/2
00:14:38
1878 ರಲ್ಲಿ ಪಂಜೆಯವರು ಜನಿಸಿದರು ತಂದೆ
00:14:43
ರಾಮಪ್ಪಯ್ಯ ತಾಯಿ ಸೀತಮ್ಮ ಪ್ರಾಥಮಿಕ
00:14:46
ಶಿಕ್ಷಣವನ್ನು ಬಂಟವಾಳದಲ್ಲಿ ಮುಗಿಸಿದವರು ಪ್ರೌಢ
00:14:49
ಶಿಕ್ಷಣವನ್ನ ಮಂಗಳೂರಿನಲ್ಲಿ ಪಡೆದುಕೊಂಡು ಆನಂತರ
00:14:52
ಬಿಎ ಪದವಿಯನ್ನ ಮಂಗಳೂರಿನ ಸಂತ್ ಎಲೋಷಿಯಸ್
00:14:55
ಕಾಲೇಜಿನಲ್ಲಿ ಮುಗಿಸಿ
00:14:58
ಅಧ್ಯಾಪಕರಾಗಿ ತಮ್ಮ ವೃತ್ತಿಯನ್ನು
00:15:01
ಆರಂಭಿಸುತ್ತಾರೆ ಅಧ್ಯಾಪಕರಾದ ಮೇಲು ಕೂಡ
00:15:05
ಮಂಗಳೂರಿನಲ್ಲಿ
00:15:06
ಬಾಲಸಾಹಿತ್ಯವನ್ನು
00:15:08
ಕುರಿತಂತೆ ಅವರು ವಿಶೇಷವಾದ ಕೆಲಸವನ್ನು
00:15:11
ಮಾಡಿದ್ದಾರೆ ಪಂಜಯ್ ಅವರಿಗೆ ಶಿಶು ಸಾಹಿತ್ಯದ
00:15:15
ಜನಕ ಅನ್ನುವಂತಹ ಒಂದು ದೊಡ್ಡ ಹೆಸರೇ ಇದೆ ಕವಿ
00:15:19
ಶಿಷ್ಯ ಅನ್ನುವಂತಹ
00:15:21
ಕಾವ್ಯನಾಮದಿಂದ ಹಲವಾರು ಕಥೆ ಪ್ರಬಂಧಗಳನ್ನು
00:15:25
ರಚಿಸಿದ್ದಾರೆ ಕನ್ನಡ ವ್ಯಾಕರಣ ಶಬ್ದಮಣಿ ದರ್ಪಣ
00:15:28
ಕೋಟಿ ಚೆನ್ನಯ್ಯ ಅಂತಾದವು ಇವರ ಕೃತಿಗಳು
00:15:32
ಮಕ್ಕಳಿಗಾಗಿ ಅನೇಕ ಕಥನ ಕವನಗಳನ್ನು ರಚಿಸಿದ
00:15:36
ಖ್ಯಾತಿಯು ಕೂಡ ಇವರದ್ದೇ ಹಾಗಾಗಿ ಇವರ ರಚನೆಗಳು
00:15:42
ಇದೆಯಲ್ಲ ಅಂದ್ರೆ ಅರಗಣೆ ಮುದ್ದೆ ಸಿಗಡಿ ಯಾಕೆ
00:15:46
ಒಣಗಲಿಲ್ಲ ಮೆಣಸಿನಕಾಳಪ್ಪ ಮೂರು ಕರಡಿಗಳು ಇಲಿಗಳ
00:15:49
ತಗತೈ ಇವೆಲ್ಲ ಅವರ ಕಥೆಗಳು
00:15:53
ನಾವೇನು ಹೊಸದಾಗಿ ಇವತ್ತಿನ ಕಾಮಿಕ್ಸ್
00:15:55
ಪ್ರಪಂಚಕ್ಕೆ
00:15:57
ಕಾಲಿಟ್ಟಿದ್ದೇವಲ್ಲ ಅಂತಹ ಎಲ್ಲ ಕಲ್ಪನೆಗಳನ್ನು
00:16:00
ಕೂಡ ಪಂಜೆಯವರು ತಮ್ಮ ಕಥೆಗಳ ಮೂಲಕವೇ ತಗೊಂಡು
00:16:04
ಬಂದಿಟ್ಟರು ಓದುವ ಮಕ್ಕಳಿಗೆ ಆ ಇಲಿಗಳ ತಗತೈ
00:16:08
ಅನ್ನುವಂತಹ ಕಥೆ ಎಲ್ಲವೂ ಕೂಡ ಕಣ್ಮುಂದೆ
00:16:11
ಚಿತ್ರಗಳನ್ನು ತರ್ತಾ ಹೋಯಿತು ಹಾಗಾಗಿ ಮಕ್ಕಳಿಗೆ
00:16:15
ಓದುವ ಅಭ್ಯಾಸವನ್ನು ಮಾಡಿದರು ತಂಕಣ ಗಾಳಿಯಾಟ
00:16:19
ಅನ್ನುವ ಪದ್ಯವು ಕೂಡ ಇಷ್ಟೇ ಮುಖ್ಯವಾಗಿರುವಂತಹ
00:16:24
ಒಳ್ಳೆಯ ಪದ್ಯ ಹಾವಿನ ಹಾಡು ಸಂಜೆಯ ಹಾಡು ಅಣ್ಣನ
00:16:28
ವಿಲಾಪ ಡೊಂಬರ ಚನ್ನಿ ಇವೆಲ್ಲವೂ ಕೂಡ
00:16:32
ಪಂಜೆಯವರ ಕೊಡುಗೆ ಕನ್ನಡ ಸಾಹಿತ್ಯಕ್ಕೆ ಅಂತ
00:16:35
ಹೇಳಿ ಹೇಳಬಹುದು ರಾಯಚೂರಿನಲ್ಲಿ ನಡೆದ 20ನೇ
00:16:40
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯನ್ನು
00:16:43
ಪಂಜೆ ಮಂಗೇಶ್ವರಯರಿಗೆ ಈ ನಾಡು ನೀಡಿ ಗೌರವವನ್ನು
00:16:48
ಕೊಟ್ಟಿದೆ ಹಾಗೆ ಇಟ್ಟುಕೊಂಡಂತವರು ಪೂರ್ತಿಯಾಗಿ
00:16:52
ಈ ನವೋದಯದ
00:16:54
ಲಕ್ಷಣಗಳನ್ನು ಇಟ್ಟುಕೊಳ್ಳುವ ರೀತಿಯಲ್ಲೇ ಈ
00:16:57
ಪೂರ್ತಿಯಾಗಿ ಅವರು ಬರೆದಿದ್ದಾರೆ ಈ ಕವನವನ್ನ
00:17:01
ನಿಮ್ಮ ಅರಿವಿಗೆ ಈಗ ಅದು ಬಂದಿದೆ ಅಂದ್ರೆ ಇದರ
00:17:04
ಲಕ್ಷಣವಿತ್ತಲ್ಲ ಆಡು ಮಾತಿನ ಭಾಷೆಯನ್ನು ಸ್ವಲ್ಪ
00:17:08
ಮಟ್ಟಿಗೆ
00:17:09
ಪರಿಷ್ಕರಣವನ್ನು ಮಾಡಿದ್ದಾರೆ ಪರಿಷ್ಕಾರ ಮಾಡಿ
00:17:12
ಅದನ್ನ ತಗೊಂಡು ಬಂದಿದ್ದಾರೆ ಅಲ್ಲೇ ಆ ಕಡೆ
00:17:15
ನೋಡಲ್ಲ ಇದು ತೀರ ನಾವು ಇವತ್ತು ಮಾತಾಡುವಂತದ್ದು
00:17:18
ಅಲ್ಲಿ ಆ ಕಡೆ ನೋಡು ಅಂತ ನಾವೇನು ಮಾತಾಡ್ತೀವಲ್ಲ
00:17:22
ಅದಕ್ಕೊಂದು ಇಳಿಯನ್ನು ಕೊಟ್ಟು ಅದನ್ನ
00:17:25
ದೀರ್ಘಾಕ್ಷರ ಮಾಡಿ ಅಲ್ಲೇ ಆ ಕಡೆ ನೋಡಲ್ಲ ಅಲ್ಲೇ
00:17:29
ಕೊಡವರ ನಾಡಲ್ಲ ಅಲ್ಲೇ ಕೊಡವರ ಬೀಡಲ ಅಲ್ಲಿ ಅಲ್ಲ
00:17:34
ಇವುಗಳನ್ನ ಇಟ್ಕೊಂಡು ಆಡು ಭಾಷೆಯನ್ನ ಇಟ್ಕೊಂಡು
00:17:37
ಇದನ್ನ
00:17:38
ಮುಂದುವರಿಸಿದ್ದಾರೆ ಮತ್ತೆ ನವೋದಯದ ಅತ್ಯಂತ
00:17:42
ದೊಡ್ಡ ಲಕ್ಷಣ ಅಂತ ಹೇಳಿ ಅಂದ್ರೆ ಕಾವ್ಯದ ಅನುಭವ
00:17:46
ಜನಸಾಮಾನ್ಯನಿಗೂ ಕೂಡ ತಲುಪಬೇಕು ಮತ್ತೆ ಅದರಲ್ಲಿ
00:17:50
ಇರುವ ವಿಷಯ ಏನಿದೆ ಅನ್ನೋದು ಇದೆಯಲ್ಲ ಅದನ್ನ
00:17:53
ಬಹಳ ಗಂಭೀರವೂ ಹೌದು ಮತ್ತು ಸರಳವೂ ಹೌದು ಮೊದಲನೇ
00:17:57
ಸಾಲು ಇಟ್ಕೊಂಡಾಗ ನಮಗೆ ಅನ್ಸುತ್ತೆ ಎಲ್ಲಿ
00:18:00
ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳು
00:18:04
ಅನ್ನುವಂತಹ ಸಾಲು ಭೂರಮೆ ಅಂದ್ರೆ ಭೂದೇವಿ ರಮ
00:18:09
ಅನ್ನುವ ಹೆಸರು ಲಕ್ಷ್ಮಿಗೆ ಇರುವಂತದ್ದು ಭೂ
00:18:12
ಅನ್ನುವಂತದ್ದು ಭೂಮಿಗೆ ಇರುವಂತಹ ಹೆಸರು
00:18:15
ಎರಡನ್ನು ಒಟ್ಟಿಗೆ ತರ್ತಾರೆ ಪಂಜೆಯವರು ಎಲ್ಲಿ
00:18:18
ಭೂರಮೆ ದೇವ ಸನ್ನಿಧಿ ಬಯಸಿ ಮೇಲೆಲ್ಲೋ ದೇವ
00:18:22
ಸನ್ನಿಧಿ ಇಲ್ಲ ಇಲ್ಲಿಯೇ ಇದೆ ಭೂಮಿಯಲ್ಲಿ ನಮ್ಮ
00:18:25
ನಡುವಿದೆ ಅದನ್ನ ಬಯಸಿ ಹಾಗೆ ಬಿಮ್ಮನೆ ಬಂದಾಳೋ
00:18:30
ಸುಮ್ಮನೆ ಮಾತಾಡದೆ ಚಲಿಸಿ ಬಂದು ನಿಂತುಕೊಂಡಳು
00:18:33
ಎಲ್ಲಿ ಭೂಮಿ ತನ್ ತಾನೇ ತನ್ನನ್ನು ತಾನು
00:18:36
ತೆರೆದುಕೊಳ್ಳುತ್ತಾಳೋ ಅಲ್ಲಿ ಪ್ರಕೃತಿ ಸೌಂದರ್ಯ
00:18:39
ಅನ್ನುವುದು
00:18:41
ಒಟ್ಟಾರೆಯಾಗಿ ಬಂದು ನಿಂತುಬಿಡುತ್ತೆ ಕೊಡುಗು
00:18:43
ಹಾಗೆಯೇ ಇದೆ ನೀವು ನೋಡಿರುವುದರಿಂದ ಆ ಜಾಗ
00:18:46
ನಿಮಗೆ
00:18:47
ಪರಿಚಿತ ಹಾಗೆ ಪ್ರಾಸವನ್ನು ಬಿಡಬಾರದಲ್ಲ ಕವನದ
00:18:51
ರೀತಿ ಅದು ಆ ಭೂರಮೆ ದೇವ ಸನ್ನಿಧಿ ಅನ್ನುವ
00:18:55
ಶಬ್ದಕ್ಕೆ ಸಂವಾದಿಯಾಗಿ ಮೋಹನಗಿರಿಯ ಬೆರಗಿ
00:19:00
ರೂಪಿನಿಂದಲಿ ನಿಂದಳು ಬಂದವಳು ಹೇಗೆ
00:19:04
ನಿಂತುಕೊಂಡಳು ಅವಳ ರೂಪವನ್ನು ಅಲ್ಲಿ
00:19:07
ಪೂರ್ತಿಯಾಗಿ ಹರಡಿದ್ದಾಳೆ ಬಂದವಳು ಹೇಗೆ
00:19:10
ಮೋಹನವಾದ ಅತ್ಯಂತ ಮೋಹಕವಾಗಿರುವ ಅದ್ಭುತ
00:19:13
ಚೆಲುವಿನಿಂದ ಕೂಡಿರುವಂತಹ
00:19:16
ದೊಡ್ಡ ದೊಡ್ಡ ಬೆಟ್ಟಗಳು ಅದರಲ್ಲಿ ಇರುವಂತಹ
00:19:19
ಸಸ್ಯ ಸಂಪತ್ತು
00:19:21
ವೃಕ್ಷರಾಜಿ ಎತ್ತಕಡೆ ನೋಡಿದರು ಕೂಡ ಹಸಿರು ಹಾಗೆ
00:19:26
ನೋಡಿದವರಿಗೆ ಬೆರಗು ಹುಟ್ಟಿಸುವಂತಹ ರೂಪನ್ನ
00:19:29
ಮಾಡಿ ಆಕೆ ನಿಂದಿದ್ದಾಳೆ ಎಲ್ಲಿ ಮುಗಿಲಲ್ಲಿ
00:19:34
ಮಿಂಚಿನೊಲ್ ಕಾವೇರಿ ಹೇಗೆ ಬಂದು ಹೇಗೆ ಹರಿತಾಳೆ
00:19:37
ಅನ್ನೋದು ಇದೆಯಲ್ಲ ನೋಡುವಷ್ಟರಲ್ಲಿ ಕಾವೇರಿ
00:19:40
ಮೇಲೆ ಬಂದು ಆಕೆ ತನ್ನ ವಿಸ್ತಾರವನ್ನು ಹೆಚ್ಚು
00:19:43
ಮಾಡಿಕೊಂಡು ಹರಿದಿದ್ದಾಗಿರುತ್ತೆ ಕೊನೆಯ ಭಾಗ
00:19:46
ನೋಡಿ ಹೊಳೆ ಹೊಳೆ
00:19:49
ಹೊಳೆವಳು ಹೊಳೆಯುವುದು ಅನ್ನುವ ಪೂರ್ಣ ಪದ
00:19:52
ಕೊನೆಯಲ್ಲಿ ಬಂದರೆ ಮೊದಲು ಹೊಳೆಯಾಗಿ ಪುಟ್ಟದಾಗಿ
00:19:56
ಇದ್ದಂತವಳು ಆಮೇಲೆ ಆ
00:19:58
ವಿಸ್ತಾರವನ್ನ ಹೆಚ್ಚು ಮಾಡಿಕೊಳ್ಳುತ್ತಾಳೆ
00:20:00
ಹಾಡುವ ಲಯಕ್ಕೆ ಸರಿಹೊಂದುವಂತೆ
00:20:04
ಕೊನೆಯ ವಾಕ್ಯವನ್ನು ಒಂದೇ ಪದವನ್ನು ಇಟ್ಟುಕೊಂಡು
00:20:08
ಪಂಜೆಯವರು ಇದನ್ನ ವಿಸ್ತರಿಸಿದ್ದಾರೆ ಹೊಳೆ ಹೊಳೆ
00:20:11
ಹೊಳೆವಳು ಅಂತ ಹೇಳಿ ಹಾಗೆ ಕಳೆ ಕಳೆ ಕಳೆವಳು
00:20:17
ನೆಲವನ್ನು ತಣಿಸಿ ನೆಲಕ್ಕೆ ತೃಪ್ತಿಯನ್ನು
00:20:20
ಕೊಟ್ಟು ಜನಮನ ಹೊಲದ ಕಳೆ ಕಳೆ ಅನ್ನುವ ಶಬ್ದಕ್ಕೆ
00:20:25
ಎರಡು ಅರ್ಥ ಒಂದು ಅತ್ಯಂತ
00:20:29
ಒಳ್ಳೆಯ
00:20:31
ರೂಪಿನಿಂದ ಹೊಳೆಯುವಂತದ್ದು ಅಂತ ಆದ್ರೆ ಕಳೆ
00:20:35
ಅಂದ್ರೆ ಬೇಡದ್ದು ಅಂತಾನೂ ಅರ್ಥ ಆಗುತ್ತೆ ಕಳೆ
00:20:38
ಕಳೆ ಕಳೆವಳು ಅಂದ್ರೆ ಬೇಡದ ತ್ಯಾಜ್ಯಗಳು
00:20:42
ಏನಿತ್ತು ಒಂದು ಸರಿ ನೀರು ಹರಿದರೆ ಅದು
00:20:44
ಕೊಚ್ಚಿಕೊಂಡು ಹೋಗಿಬಿಡುತ್ತೆ ಹಾಗೆ ಕಳೆಯವಳು
00:20:47
ಹಾಗೆ ಅಲ್ಲಿ ಬೇಡದ್ದು ಏನಾದರೂ ಬೆಳೆದಿದ್ರೆ
00:20:50
ಅದನ್ನು ಕೂಡ ತೆಗೆದು ಹಾಕ್ತಾಳೆ ಆ ಕಳೆಯನ್ನ
00:20:54
ಹೆಚ್ಚು ಕೂಡ ಮಾಡ್ತಾಳೆ ಇದುನ್ನು ಸೇರಿಸಿ
00:20:57
ಏನಾಗುತ್ತೆ ಅದು ಒಂದು ಕೊಡಗರ ನಾಡಾಗುತ್ತೆ
00:21:02
ಇದಲ್ಲದಲೇನೆ ಈ ರೊಮ್ಯಾಂಟಿಸಂನ ಇನ್ನೊಂದು ರೀತಿ
00:21:06
ಇದೆಯಲ್ಲ ಆದರ್ಶ
00:21:08
ಕನಸುಗಾರಿಕೆ ಪ್ರಕೃತಿ ಪ್ರೇಮ ಇವೆಲ್ಲ ಇದೆಯಲ್ಲ
00:21:12
ಅಂತರ್ಮುಖತೆ ಭಾವನೆಗೆ ಪ್ರಾಧಾನ್ಯ ಇಡೀ ಕವನ
00:21:16
ಅತ್ಯಂತ ಒಳ್ಳೆಯ ಭಾವವನ್ನು ನಮ್ಮೊಳಗಡೆಗೆ
00:21:20
ಉಂಟುಮಾಡುತ್ತೆ ಆ ಕವನವನ್ನು ಓದ್ತಾ ಹೋದ ಹಾಗೆ
00:21:24
ನಾವು ಇಲ್ಲಿದ್ದೀವಿ ಅಂತ ಅನಿಸೋಕೆ ಆರಂಭ
00:21:26
ಆಗೋದಿಲ್ಲ ಆ ಕೊಡಗಿನ ಮಧ್ಯದಲ್ಲಿ ನಾವು ಕೂಡ
00:21:29
ಇದ್ದುಬಿಡ್ತೀವಿ ಇದು ಒಂದು ಕವನಕ್ಕೆ ಇರುವಂತಹ
00:21:32
ಶಕ್ತಿ ಸಮರ್ಥನಾದ ಒಬ್ಬ ಕವಿ ಆಂಗ್ಲದ
00:21:36
ರೊಮ್ಯಾಂಟಿಕ್ ಕಾವ್ಯದ
00:21:38
ಲಕ್ಷಣಗಳನ್ನೇನೋ ತಗೊಂಡ್ರು ಆದರ್ಶ ಅಂತ ಹೇಳಿ
00:21:41
ಆದರೆ ಕನ್ನಡದ ನವೋದಯ ಪರಂಪರೆಯ ಕವಿಗಳ ಸತ್ವವೇ
00:21:45
ಅದು ಹೇಗೆ ಅಂತ ಹೇಳಿ ಅಂದ್ರೆ ತೆಗೆದುಕೊಂಡಂತಹ
00:21:50
ಲಕ್ಷಣಗಳನ್ನ ಕನ್ನಡದಾಗಿ ಮಾಡಿ ದುಡಿಸಿಕೊಂಡರು ಈ
00:21:53
ಭಾಗದ 16 ಕವಿತೆಗಳನ್ನು ನೀವು ಓದಿಬಿಟ್ರೆ ನಿಮಗೆ
00:21:57
ಅದು ಅರ್ಥ ಆಗಿಬಿಡುತ್ತೆ ಪೂರ್ತಿಯಾಗಿ
00:21:59
ಕನ್ನಡದಾಗಿ ಕನ್ನಡದ ರೀತಿಯಲ್ಲಿ ಕನ್ನಡದ
00:22:02
ಶೈಲಿಯಲ್ಲಿ
00:22:05
ದುಡಿಸಿಕೊಂಡರು ಪ್ರಕೃತಿ ಗೀತೆಗಳನ್ನು ಕುರಿತಂತೆ
00:22:08
ಮಾತಾಡ್ತಾ ಹೋದ್ರೆ ಕುವೆಂಪು ಅವರನ್ನು ಸೇರಿಸಿ
00:22:11
ನಿಮಗೆ ಅದು ಎಷ್ಟು ಚೆನ್ನಾಗಿ ಹೊರಗೆ ಬಂದಿದೆ
00:22:14
ಅನ್ನುವಂತದ್ದು ನಿಮಗೆ ಅರ್ಥ ಆಗುತ್ತೆ ಅಂದ್ರೆ
00:22:17
ನವೋದಯದ
00:22:18
ಲಕ್ಷಣಗಳನ್ನು ಇಟ್ಕೊಂಡು ಕನ್ನಡದ ವಸ್ತುವನ್ನು
00:22:22
ಕೂಡ ಬಳಸಿಕೊಂಡು ಒಂದೇ ಕವನದ ಒಳಗಡೆ ಸಂಸ್ಕೃತಿ
00:22:26
ದೇಶಪ್ರೇಮ
00:22:27
ಸೌಹಾರ್ಧತೆ ಮತ್ತು ಭೌಗೋಳಿಕ ಚಿಂತನೆ ಮತ್ತೆ
00:22:32
ಪುರಾಣ ಇತಿಹಾಸ ಇವಿಷ್ಟನ್ನು ಕೂಡ ಯಾಕೆಂದರೆ
00:22:35
ಅಲ್ಲಿ ಆಳ್ವಿಕೆ ನಡೆಸಿದಂತಹ ಅರಸುಮನೆತನಗಳ
00:22:38
ಹೆಸರನ್ನು ಕೂಡ
00:22:40
ಕೊಟ್ಟುಕೊಂಡಿರುವುದರಿಂದ ಇದಷ್ಟನ್ನು
00:22:42
ಸೇರಿಸಿದಂತಹ ಒಂದು ಅದ್ಭುತ ಕವನ ಹುತ್ತರಿಯ ಹಾಡು
00:22:46
ಬರೆದಂತವರು ಪಂಜೆ ಮಂಗೇಶ್ ರಾಯರು ಇದನ್ನ ನೀವು
00:22:50
ಪೂರ್ಣ ಪ್ರಮಾಣದಲ್ಲಿ ಮತ್ತೊಮ್ಮೆ ಓದಿ ಅಭ್ಯಾಸ
00:22:54
ಮಾಡುತ್ತೀರಿ ಅಂತ ಹೇಳಿ ನಾನು ಭಾವಿಸಿದ್ದೇನೆ
00:22:57
ಮುಂದಿನ ತರಗತಿಗಳಲ್ಲಿ ಮತ್ತಷ್ಟು ಮತ್ತೆ
00:23:00
ಭೇಟಿಯಾಗೋಣ